ಆದಿಬುದ್ಧ
ಲೋಕೋತ್ತರವಾದ ಏಳು ವಿಶ್ವಸ್ಥಿತಿಗಳಿಗೆ ನಿಯಾಮಕನಾದ ಏಕಮೇವಾದ್ವಿತೀಯನಾದ ಈತನ ಕಲ್ಪನೆ ಮಹಾಯಾನ ಬೌದ್ಧರಲ್ಲಿ ತತ್ರಾಪಿ ಟಿಬೆಟ್ ದೇಶದ ಯೌಗತಾಂತ್ರಿಕ ಪಂಥದಲ್ಲಿ ಉಂಟು. ನಗ್ನನಾದ, ನೀಲದೇಹದ, ತಾಪಸಿ ಬುದ್ಧ ತನ್ನ ಚಿತ್ತದಿಂದಲೇ ತನ್ನನ್ನು ಹೀಗೆ ನಿರ್ಮಿಸಿಕೊಂಡನೆಂಬ ನಂಬಿಕೆ ಇದೆ. ಬೋಧಿಯೇ ಮುಖ್ಯ ರಸವಾಗಿ ಉಳ್ಳ ಈ ಆದಿಬುದ್ಧನನ್ನು ವಜ್ರಸತ್ತ್ವವೆಂದೂ ವ್ಯವಹರಿಸುತ್ತಾರೆ. ಐವರು ಧ್ಯಾನಿಬುದ್ಧರನ್ನು ನಿಯಂತ್ರಣ ಮಾಡುವ ಈ ಆದಿ ಬುದ್ಧನಿಗೆ ಸ್ತ್ರೀರೂಪದ ಶಕ್ತಿಯರನ್ನೂ ಸೇರಿಸುತ್ತಾರೆ.  								
	(ಎಸ್.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ